ಒಂದು ಸಾಹಿತ್ಯ ವಿಚಾರಸಂಕಿರಣ
ಪುತ್ತೂರಿನ ಕರ್ನಾಟಕ ಸಂಘವು ತನ್ನ ವಾರ್ಷಿಕ ಸಾಹಿತ್ಯ-ಸಂಸ್ಕೃತಿ ಸಲ್ಲಾಪದ ಅಂಗವಾಗಿ ನಿನ್ನೆ ಫೆಬ್ರವರಿ ೫ ರಂದು ಸಾಹಿತ್ಯ ಗೋಷ್ಠಿಯನ್ನು ಹಮ್ಮಿಕೊಂಡಿತ್ತು. 'ಮೂರು ಗಮನಾರ್ಹ ಕೃತಿಗಳು' ಎಂಬ ಶೀರ್ಷಿಕೆಯಲ್ಲಿ ಡಿ.ಕೆ.ಚೌಟರ ಮಿತ್ತಬೈಲು ಯಮುನಕ್ಕೆ, ಗುರುರಾಜ ಮಾರ್ಪಳ್ಳಿಯವರ ಖ್ಯಾಲ್ ಖಯಾಲುಗಳು ಮತ್ತು ನಾಗವೇಣಿಯವರ ಗಾಂಧಿ ಬಂದ ಕೃತಿಗಳನ್ನು ಚರ್ಚೆಗೆ ಎತ್ತಿಕೊಳ್ಳಲಾಗಿತ್ತು. ಡಾ.ರಾಜಶ್ರೀ, ಆನಂದ ಕೊಡಿಮ್ಬಳ ಮತ್ತು ಅನುಪಮಾ ಪ್ರಸಾದ್ ಅವರು ಕೃತಿ ವಿಮರ್ಶೆ ನಡೆಸಿಕೊಟ್ಟರು.
ನಾನು ಸಭೆಯ ಅಧ್ಯಕ್ಷತೆ ವಹಿಸಿದ್ದೆ. ಸಾಹಿತ್ಯ ಕೃತಿಗಳನ್ನು ವಿಮರ್ಶಕರು ಮತ್ತು ಸಾಹಿತ್ಯಪ್ರಿಯರು ಚರ್ಚಿಸಿದರೆ ಅವುಗಳ ಶಕ್ತಿ ಮತ್ತು ಮಿತಿಗಳನ್ನು ಅರಿತಂತಾಗುತ್ತದೆ, ಸಾಹಿತ್ಯೇತರರು ಚರ್ಚೆಗೆ ಎತ್ತಿಕೊಂಡಾಗ ಅದು ಚೌಕಟ್ಟಿನಿಂದ ಆಚೆಗೆ ನಿಂತು ತಪ್ಪು ತಿಳಿವಳಿಕೆಗಳಿಗೆ ಕಾರಣವಾಗುತ್ತದೆ, ಈ ವಿಚಾರಸಂಕಿರಣ ಒಂದು ಒಳ್ಳೆಯ ಪ್ರಯತ್ನ ಎಂದು ನಾನು ಹೇಳಿದೆ.