Wednesday 29 December 2010

"ಬೆಂಗಳೂರು" ಎಂಬ ಹೆಸರು ಹೇಗೆ ಬಂತು?

         ಸ್ಥಳನಾಮಗಳು ಸಾಮಾನ್ಯವಾಗಿ ಭೂಭೌತಿಕ ವಿಶೇಷಗಳಿಂದ ವ್ಯುತ್ಪತ್ತಿಗೊಳ್ಳುತ್ತವೆ.  ಬೆಂಗಳೂರು ಸುತ್ತಮುತ್ತ ಬೆಣಚುಕಲ್ಲುಗಳು  ನೆಲದಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಸೂರ್ಯನ ಬೆಳಕಿಗೆ ತುಸು ಪ್ರತಿಫಲನ ನೀಡುವ ಸ್ವಲ್ಪ ಬಿಳಿಯದಾದ ಕಲ್ಲುಗಳು ಅವು. ಬೆಣಚು ಎಂದರೆ ಬೆಳಕು ಎಂದರ್ಥ.  ಬಿಳಿಕಲ್ಲಿನಲ್ಲಿ ಬೆಳಕಿನ ಅಂಶ ಸೇರಿರುವುದರಿಂದಲೇ ಅವನ್ನು ಬೆಣಚುಕಲ್ಲು ಅನ್ನುತ್ತಾರೆ.   ಬೆಣಚು+ಕಲ್ಲಿನ = ಬೆಂಗಲ್ಲಿನ+ಊರು  = ಬೆಂಗಳೂರು ಎಂದು ನಿಷ್ಪನ್ನಗೊಂಡಿರಬೇಕೆಂದು ನನಗೆ ತೋರುತ್ತದೆ. ಬೆಣಚುಕಲ್ಲನ್ನು ಬೆಂಗಲ್ಲು ಅನ್ನುತ್ತಾರೆ. ಈಗಾಗಲೇ ಬಹುವಾಗಿ ಪ್ರಚಾರದಲ್ಲಿರುವ  'ಬೆಂದಕಾಳೂರು'  ಎಂಬುದರಿಂದ ಬೆಂಗಳೂರು ಎಂಬ ಶಬ್ದ  ನಿಷ್ಪನ್ನಗೊಂಡುದಲ್ಲ; ಅದು ಬೆಣಚುಕಲ್ಲಿನ   ಊರಾದುದರಿಂದ "ಬೆಂಗಳೂರು" ಆಗಿದೆ ಎಂದೇ ನನಗೆ ಅನಿಸುತ್ತದೆ.



                                  ...........................................................................................................................



DURING SUNSET AT KARWAR BEACH

1 comment:

  1. Very nice information. It will help for all the people to know about Bangalore

    K. Ashok

    ReplyDelete