"ಮಂಗಳೂರು" ಸ್ಥಳನಾಮದ ವ್ಯುತ್ಪತ್ತಿ
"ಮಂಗಳೂರು" ಎನ್ನುವ ಸ್ಥಳನಾಮ ಮೇರ್ಕಳ ಎನ್ನುವ ಶಬ್ದದಿಂದ ನಿಷ್ಪನ್ನಗೊಂಡಿರಬೇಕೆಂದು ತೋರುತ್ತದೆ. ಮೇರರ+ಕಳ ಮೇರ್ಕಳ. ಮೇರರು ವಾಸಿಸುತ್ತಿದ್ದ ಸ್ಥಳ ಎಂದು ಇದರ ಅರ್ಥ (ಭಟ್ಟರ+ಕಳ>ಭಟ್ಕಳ ಆದಂತೆ). ಕರಾವಳಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಬ್ಯಾರಿಗಳು ಮಂಗಳೂರನ್ನು ಇವತ್ತಿಗೂ ತಮ್ಮ ಬ್ಯಾರಿ ಭಾಷೆಯಲ್ಲಿ ’ಮೈಕ್ಕಲ’ ಎಂದೇ ಕರೆಯುತ್ತಾರೆ. ಮೇರ್ಕಳ ಎಂಬುದು ಬ್ಯಾರಿ ಭಾಷೆಯಲ್ಲಿ ಅಪಭ್ರಂಶಗೊಂಡು ಮೈಕ್ಕಲ ಆಗಿರಬೇಕು : ಮೇರ್ಕಳ>ಮೈಕ್ಕಲ.
ಕರಾವಳಿಯಲ್ಲಿ ಕನ್ನಡದ ಪ್ರಾದುರ್ಭಾವದ ಬಳಿಕ ಮೇರ್ಕಳ ಅಥವಾ ಮೈಕ್ಕಲ ಸಂಸ್ಕೃತೀಕರಣಗೊಂಡು ’ಮಂಗಲ’ ಆಗಿರುವ ಸಾಧ್ಯತೆ ಇದೆ : ಮೇರ್ಕಳ>ಮೈಕ್ಕಲ>ಮಂಗಲ. ಕ್ರಮೇಣ ಮಂಗಲಕ್ಕೆ ’ಊರು’ ಸೇರಿ ಮಂಗಳೂರು ಆಗಿರಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೈರ್ಕಳ, ಕುಡಾಲ ಮೇರ್ಕಳ ಎಂಬ ಊರುಗಳು ಇವತ್ತಿಗೂ ಇವೆ. ಪರಿಶಿಷ್ಟ ಜಾತಿಯ ಮೇರರು ಕರಾವಳಿಯ ಮೂಲನಿವಾಸಿಗರೂ ಆಗಿದ್ದಾರೆ.
"ಮಂಗಳೂರು" ಸ್ಥಳನಾಮದ ವ್ಯುತ್ಪತ್ತಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು, ನಾನು ಅನೇಕ ಭಾರಿ ನಿಮ್ಮ ಬ್ಲಾಗ್ ಗೆ ಬ೦ದು ನಿಮ್ಮನ್ನು ಸ್ವಾಗತಿಸಿದ್ದೇನೆ. ನೀವು ಒಮ್ಮೆಯಾದರು ನನ್ನ ಬ್ಲಾಗ್ ಗೆ ಬ೦ದಿಲ್ಲ. ಈ ಸಲ ಖ೦ಡಿತ ನನ್ನ ಬ್ಲಾಗ್ ಗೆ ಭೇಟಿ ಕೊಡಿ ಎನ್ನುವುದು ನನ್ನ ಒತ್ತಾಯದ ಕೋರಿಕೆ ಸರ್.
ReplyDeleteinteresting information...and new too...
ReplyDeleteಇದೊಳ್ಳೇ interesting ಆದ ವ್ಯುತ್ಪತ್ತಿ. ಮೈಕ್ಕಲ > ಮಂಗಳ ಆದ ಕಾರಣವನ್ನೇನಾದರೂ ಊಹಿಸಬಹುದೇ? ಮಂಗಳ/ಮಂಗಲ ಎಂಬ ಸ್ಥಳನಾಮ ಇನ್ನೂ ಅನೇಕ ಕಡೆ ಇದೆ, ನಾಗಮಂಗಲ, ನೆಲಮಂಗಲ, ಹುಲಿಮಂಗಲ, ಮಂಗಲ ಇತ್ಯಾದಿ. ಕರಾವಳಿಯ ವಿಶಿಷ್ಟ ಹೆಸರುಗಳ ನಡುವೆ ಮಂಗಳೂರು ತೀರ ಬೇರೆಯಾಗಿ ಕಾಣುತ್ತಿತ್ತು. ಈ ವ್ಯುತ್ಪತ್ತಿ ಬಹುಶಃ ಈ ವ್ಯತ್ಯಾಸವನ್ನು ವಿವರಿಸುತ್ತದೆ.
ReplyDeleteಹಾಗೇ ಉಡುಪಿ? ಉಡುಪ (ನಕ್ಷತ್ರಗಳ ರಾಜ, ಚಂದ್ರ) ತಪಸ್ಸು ಮಾಡಿದ ಸ್ಥಳವಾದ್ದರಿಂದ ಉಡುಪಿ ಆಯಿತೆಂದು ಸಂಪ್ರದಾಯ ತಿಳಿಸುತ್ತದೆ. ಆದರೂ ಈ ಪ್ರದೇಶದ ಇತರ ಹೆಸರುಗಳಿಂದ ಈ ಹೆಸರೂ ಬೇರೆಯಾಗಿಯೇ ನಿಲ್ಲುತ್ತದೆ.