Tuesday 15 February 2011

'ಗಂಡ' ಎಂಬ ಶಬ್ದದ ಬಗ್ಗೆ....

     ಪತಿಯನ್ನು 'ಗಂಡ' ಎಂಬ ಶಬ್ದದಿಂದ ಕರೆಯುವದು ವಾಡಿಕೆ.  ಈ ಶಬ್ದ ಹೇಗೆ ಬಳಕೆಗೆ ಬಂತು, ಅದರೊಳಗೆ ಹುದುಗಿರುವ ನಿಗೂಢ ಅರ್ಥವೇನು ಎಂಬುದು ಕುತೂಹಲಕರವಾಗಿದೆ. 
    
      ತೊಡೆಯ ಮೇಲ್ತುದಿ ಮತ್ತು ಮುಂಡದ ಕೆಳತುದಿ ಸೇರಿಕೊಳ್ಳುವ ಜಾಗವನ್ನು 'ಗಂಡಸ್ಥಳ'  ಎನ್ನಲಾಗುತ್ತದೆ.  ಗಂಡ ಅಂದರೆ ವೀರ್ಯ, ಪ್ರತಾಪ, ಶೌರ್ಯ ಎಂಬರ್ಥಗಳಿವೆ.  'ಗಂಡಿನೋಳ್ ಭೀಮಸೇನಂ' ಎಂಬ ಮಾತು ಪ್ರಸಿದ್ದವಾಗಿದೆ.  ಜಟ್ಟಿಗಳು ತೊಡೆತಟ್ಟುತ  (ಗಂಡಸ್ಥಲವನ್ನು ತಟ್ಟುತ ) ಕಣಕ್ಕಿಳಿಯುತ್ತಾರೆ.  ಭೀಮ, ದುರ್ಯೋಧನನ ಗಂಡಸ್ಥಲಕ್ಕೆ ಹೊಡೆದುದರಿಂದ ದುರ್ಯೋಧನ ಧರೆಗೆ ಉರುಳಿದ.  ಅಂದರೆ, ಗಂಡ ಎಂದರೆ ವೀರ್ಯಕ್ಕೆ ಸಂಕೇತ.

     ಹೆಣ್ಣು, 'ಅವನು ನನ್ನ ಗಂಡ' ಎಂದಾಗ ಅವನು ನನ್ನ ವೀರ್ಯ, ಶೌರ್ಯ, ಬಲ, ಪ್ರತಾಪ ಎಂದು ಹೇಳಿಕೊಂಡಂತೆ ಆಗುತ್ತದೆ.  ನನ್ನ ಊರುಗೆ ಅಥವಾ ಗಂಡಸ್ಥಲಕ್ಕೆ ಅವನು ವಾರಿಸುದಾರ, ನನ್ನ ಗಂಡಸ್ಥಲದ ಒಡೆಯ ಅವನು, ನನ್ನ ಆ ಜಾಗ ಅವನಿಗಾಗಿ ಮೀಸಲಾಗಿದೆ ಎಂಬೆಲ್ಲ ಅರ್ಥಭಾರಗಳನ್ನು ಅದು ಹೊಂದಿದೆ. 

     'ಗಾಂಡುಗುದಿಗೆ' ಮತ್ತು 'ಗಾಂಡುಗೌಜಿ' ಎಂಬ ಆಡುಮಾತಿನ ಪ್ರಯೋಗದಲ್ಲಿ ಗಂಡಿನ ಪ್ರತಾಪ  ವಾಚ್ಯವಾಗಿಯೂ ಆತನ ಗಂಡಸ್ಥನ ಸೂಚ್ಯವಾಗಿಯೂ  ಅಡಗಿದೆ. ಗಾಂಡು ಇರುವವನು ಗಂಡು ಎಂಬುದು ಒಟ್ಟು ಅರ್ಥ. 
     

No comments:

Post a Comment