Monday 14 February 2011

What is "kandamoola"

                                                               'ಕಂದಮೂಲ' ಎಂದರೇನು?

        ರಾಮ, ಲಕ್ಷ್ಮಣ, ಸೀತೆಯರು ಕಾಡಿನಲ್ಲಿ ಹಣ್ಣುಹಂಪಲು, ಗೆಡ್ಡೆಗೆಣಸು, ಕಂದಮೂಲಗಳನ್ನು ತಿಂದು ಬದುಕಿದರು ಎಂದು ಹೇಳಲಾಗಿದೆ.  ಇಲ್ಲಿ ಬರುವ ಕಂದಮೂಲ ಎಂದರೇನು?  ಅದು ಗೆಡ್ಡೆಗೆಣಸುವಿಗಿಂತ ಬೇರೆಯಾದದ್ದು. 

     ಕೆಲವು ಗೆಡ್ಡೆ ಗೆಣಸುಗಳು ಮಳೆ ಬಿದ್ದಾಗ ತೇವದಲ್ಲಿ ಚಿಗುರಿಕೊಳ್ಳುತ್ತವೆ.  ಅವುಗಳ ಬುಡ ಮತ್ತು ದಂಟು ತಿನ್ನಲು ಯೋಗ್ಯವಾಗಿರುತ್ತವೆ.  ಉದಾಹರಣೆಗೆ ಕೆಸು, ಕಳಲೆ ಇತ್ಯಾದಿ.  ಬಾಳೆದಿಂಡು ಸಹ ಈ ವ್ಯಾಪ್ತಿಯಲ್ಲಿ ಬರುತ್ತದೆ.  ಎಳೆಯ ಬಾಳೆ ಸಸಿಯನ್ನು "ಕಂದು" ಎಂದು ಕರೆಯುವಲ್ಲಿ ಈ ಅರ್ಥವೇ ಇದೆ.  ಮಕ್ಕಳನ್ನು ನಾವು "ಕಂದ" ಎಂದು ಕರೆಯುತ್ತೇವೆ.  ಎಳೆಯ ಎಂಬುದು ಇದರ ಅರ್ಥ. 

     ತರಕಾರಿಗಳಲ್ಲಿ ಬೇರೆ ಬೇರೆ ಬಗೆಗಳಿವೆ.  ಸೊಪ್ಪು ತರಕಾರಿ, ಹಸುರು ತರಕಾರಿ(ಬೆಂಡೆ, ಅಲಸಂದೆ, ಬೀನ್ಸ್ ಇತ್ಯಾದಿ)ಮತ್ತು  ಗೆಡ್ಡೆಗೆಣಸು.  ಗೆಡ್ಡೆ ಗೆಣಸಿನ ಇನ್ನೊಂದು ರೂಪವೇ ಕಂದಮೂಲ.  ಒಂದೊಂದು ಋತುವಿನಲ್ಲಿ ಒಂದೊಂದು  ರೀತಿಯ ತರಕಾರಿ  ಲಭ್ಯವಾಗುವದು ಪ್ರಕೃತಿಯ ವೈಶಿಷ್ಟ್ಯ.

No comments:

Post a Comment