Saturday, 26 March 2011



                       ಬಹುಮಾನ, ಪುರಸ್ಕಾರ ಮತ್ತು ಪ್ರಶಸ್ತಿ


ಬಹುಮಾನ, ಪುರಸ್ಕಾರ ಮತ್ತು ಪ್ರಶಸ್ತಿ ಎಂಬ ಈ ಪದಗಳಿಗೆ ನಿಖರವಾದ ಬೇರೆ ಬೇರೆ ಅರ್ಥಗಳಿವೆ. ಅವುಗಳನ್ನು ಅದದೇ ಅರ್ಥದಲ್ಲಿ ಬಳಸಬೇಕು. ಇಂದು ಈ ಶಬ್ದಗಳನ್ನು ಒಟ್ಟಾರೆಯಾಗಿ ಬಳಸುತ್ತಿರುವುದು ಕಾಣುತ್ತಿದ್ದೇವೆ.


ಬಹುಮಾನದ ಹಿಂದೆ ಒಂದು ಸ್ಪರ್ಧೆ ಇರುತ್ತದೆ. 'ಸ್ಪರ್ಧೆ'ಯ ಬಳಿಕ 'ಬಹುಮಾನ' ನೀಡಲಾಗುತ್ತದೆ. ಪುರಸ್ಕಾರವನ್ನು ಪ್ರತಿಭೆ ಇರುವ  ವ್ಯಕ್ತಿಯೊಬ್ಬನನ್ನು ಪ್ರೋತ್ಸಾಹಿಸಲು, ಗುರುತಿಸಲು ನೀಡಲಾಗುತ್ತದೆ. ಇದರ ಹಿಂದೆ 'ಸ್ಪರ್ಧೆ' ಇರಲೇಬೇಕೆಂದಿಲ್ಲ. ನಗದು ಪುರಸ್ಕಾರ ಕೊಟ್ಟು  ಗೌರವಿಸುವ ಸಂಪ್ರದಾಯವಿದೆ. ಪದಕ ವಿಜೇತರನ್ನು ಅಥವಾ ಯಾವುದೋ ವಿಶಿಷ್ಟ ಕೆಲಸ ಮಾಡಿದವರನ್ನು ಪ್ರೋತ್ಸಾಹಿಸುವ ಸಲುವಾಗಿ 'ಪುರಸ್ಕಾರ' ನೀಡಲಾಗುತ್ತದೆ.


'ಪ್ರಶಸ್ತಿ' ಎಂದರೆ ಸಂಘ ಸಂಸ್ಥೆ, ಸರಕಾರ ಅಥವಾ ಸಮಾಜ ವ್ಯಕ್ತಿಯೊಬ್ಬನ ಸಾಧನೆಯನ್ನು ಗಮನಿಸಿ ಪ್ರಶಸ್ತಿಯೊಂದನ್ನಿತ್ತು ಸನ್ಮಾನಿಸುವುದು ಆಗಿದೆ. ಆಯಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ, ವಯಸ್ಸು ಮಾಗಿದ ವ್ಯಕ್ತಿಗಳನ್ನು ಪ್ರಶಸ್ತಿಯನ್ನಿತ್ತು ಸನ್ಮಾನಿಸಲಾಗುತ್ತದೆ. ಆ ಪ್ರಶಸ್ತಿಯನ್ನು ಧರಿಸುವ ಯೋಗ್ಯತೆ ಆ ವ್ಯಕ್ತಿಗೆ ಬಂದಾಗಷ್ಡೇ ಪ್ರಶಸ್ತಿಯನ್ನು ನೀಡಬೇಕು. ಸ್ಪರ್ಧೆಯೊಂದನ್ನು ಏರ್ಪಡಿಸಿ ಪ್ರಶಸ್ತಿ ನೀಡಲಾಗುವುದಿಲ್ಲ. ಅಂದರೆ, ಸ್ಪರ್ಧೆ ಏರ್ಪಡಿಸಿ 'ಪ್ರಶಸ್ತಿ' ನೀಡುವುದಲ್ಲ. ಹದಿನೆಂಟು ವರ್ಷದ ತರುಣನೊಬ್ಬನಿಗೆ ಪ್ರಶಸ್ತಿ ನೀಡಲಾಯಿತು ಎಂದು ಬರೆದರೆ ಅದು ಸರಿಯಲ್ಲ. ಬದಲಾಗಿ ಬಹುಮಾನ ಅಥವಾ ಪುರಸ್ಕಾರ ಎಂದಾಗಬೇಕು. ಹಾಗೆಂದು ಅರವತ್ತು ವರ್ಷ ಆದವರಿಗೆ ಬಹುಮಾನ ಅಥವಾ ಪುರಸ್ಕಾರ ಕೊಡುವುದಲ್ಲ. ಅವರಿಗೆ ಸನ್ಮಾನ.


ಈ ಶಬ್ದಗಳ ಸರಿಯಾದ ಅರ್ಥವನ್ನು ಗ್ರಹಿಸಿ ಉಪಯೋಗಿಸುವುದು ಒಳ್ಳೆಯದು. 

No comments:

Post a Comment