ಸೀಮಾ ಸುಂಕ ಇಲಾಖೆಯ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ
ಮಂಗಳೂರಿನ ಪಣಂಬೂರಿನಲ್ಲಿರುವ ಸೀಮಾ ಸುಂಕ (ಕಸ್ಟಮ್ಸ್) ಕಛೇರಿಯಲ್ಲಿ ನವೆಂಬರ‍್ ದಿನಾಂಕ ೩೦ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಆಯುಕ್ತರಾದ ವಿ.ಎಸ್.ಎನ್.ಚೌಧರಿ ಅಧ್ಯಕ್ಷತೆ ವಹಿಸಿದ್ದರು. ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ಭಾಷೆಯ ಚರಿತ್ರೆ ಮತ್ತು ಅದರ ಇವತ್ತಿನ ಸ್ಥಿತಿಗತಿಯ ಬಗ್ಗೆ ಮಾತನಾಡಿದೆ. ಕನ್ನಡಿಗರು ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಮಾತಾಡುವಾಗ ನಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತಾಡುತ್ತಾರೆ ಅಲ್ಲದೆ ಇತರ ಭಾಷಿಕರೊಂದಿಗೆ ಹೋಲಿಸಿ ನಮ್ಮ ದೌರ್ಬಲ್ಯಗಳನ್ನು ಎತ್ತಿ ಆಡುತ್ತಾರೆ. ಇದರಿಂದ ಕನ್ನಡಿಗರ ನೈತಿಕತೆ ಕುಂದುವುದಲ್ಲದೆ ಇತರ ಭಾಷಿಕರ ಮುಂದೆ ಹಾಸ್ಯಾಸ್ಪದವಾಗಬೇಕಾಗುತ್ತದೆ. ಈ ಪರಿಸ್ಥಿತಿ ತಪ್ಪಬೇಕು, ನಾವು ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಎತ್ತಿ ಆಡುವಂತಾಗಬೇಕು ಎಂದು ನಾನು ಉಪನ್ಯಾಸದಲ್ಲಿ ಹೇಳಿದೆ.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವಿತ್ತು. ಶ್ರೀ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಶ್ರೀ ಮಹೇಶ ಭಟ್ ಕಾರ್ಯಕ್ರಮ ನಿರೂಪಿಸಿದರು. ಮನೋರಂಜನಾ ಸಂಘದ ಕಾರ್ಯದರ್ಶಿ ಎಚ್.ಎನ್. ರವಿಶಂಕರ್ ವಂದನಾರ್ಪಣೆಗೈದರು.
No comments:
Post a Comment