ಬರಹಗಾರರ ಸಮ್ಮೇಳನ
ಮೊನ್ನೆ ಹೊಸವರ್ಷದ ಮೊದಲ ದಿನ ಕುಂದಾಪುರದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬರಹಗಾರರ ಸಮ್ಮೇಳನ ಜರುಗಿತು. ಅದೇ ದಿನ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆ ಮಾಡಿದ ಬಳಿಕ ನಾನು ಮಾಧ್ಯಮ ಸಾಹಿತ್ಯದ ಬಗ್ಗೆ ಮಾತಾಡಿದೆ. ಕೇವಲ ಇನ್ನೂರು ವರ್ಷಗಳ ಇತಿಹಾಸವಿರುವ ಮುದ್ರಣ ಮಾಧ್ಯಮ ಈ ಎಲೆಕ್ಟ್ರೋನಿಕ್ ಯುಗದಲ್ಲಿ ಬದಲಾವಣೆಯ ಸಂಧಿ ಘಟ್ಟದಲ್ಲಿದೆಯೆಂದು ನಾನು ಪ್ರತಿಪಾದಿಸಿದೆ. ಚಿತ್ರದಲ್ಲಿ ಸಾಹಿತಿ ಕೆ .ವಿ.ಕೃಷ್ಣಯ್ಯ, ಲೇಖಕ ಎನ್.ಜಿ.ಪಟವರ್ಧನ್, ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ಮತ್ತು 'ಕುಂದಪ್ರಭ' ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಅವರನ್ನು ಕಾಣಬಹುದು.