'ಮುಡುಕು' ಎಂದರೇನು?
'ಮೂಲೆಮುಡುಕು' ಎಂಬ ಶಬ್ದವನ್ನು ಬಳಸುತ್ತೇವೆ. ಈ ಮೂಲೆಯ ಜೊತೆಗೆ ಸೇರಿಕೊಂಡಿರುವ ಮುಡುಕು ಎಂದರೇನು? ಮುಡುಕು ಎಂದರೆ ಬಾಗಿದ, ಬಳುಕಿದ ಎಂದರ್ಥ. ಮೈಸೂರು ಬಳಿ ಮುಡುಕುತೊರೆ ಎಂಬ ಜಾಗವಿದೆ. ಕಾವೇರಿ ನದಿ ಅಲ್ಲಿ ಬಾಗಿ, ಬಳುಕಿ ದೀರ್ಘವೃತ್ತಾಕಾರವಾಗಿ ಸಾಗುವುದರಿಂದ ಆ ಹೆಸರು ಬಂದಿದೆ. ಹಳಗನ್ನಡದಲ್ಲಿ ಇದನ್ನು ಮುಡುಂಕು ಎಂದೂ ಹೇಳಲಾಗಿದೆ. ಇದೇ ಶಬ್ದ ' ಮೊಡುಂಕು' ಎಂಬ ರೂಪದಲ್ಲಿ ಹವ್ಯಕ ಭಾಷೆಯಲ್ಲಿದೆ. ಹೊಸ ಕನ್ನಡದಲ್ಲಿ 'ಮು' ಮಾಯವಾಗಿ 'ಡೊಂಕು' ಎಂಬ ರೂಪದಲ್ಲಿ ಬಳಕೆಯಾಗುತ್ತಿದೆ.
Oleya mahithi...
ReplyDeleteಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್, ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.
ReplyDelete