Sunday, 24 April 2011

ಪೆರ್ಲರಿಗೆ "ರಂಗಸ್ವರೂಪ ಪ್ರಶಸ್ತಿ"


ಮಂಗಳೂರಿನ "ರಂಗಸ್ವರೂಪ-ರಂಗ ಅಧ್ಯಯನ ಕೇಂದ್ರ"ವು ಸ್ಥಾಪಿಸಿದ "ರಂಗಸ್ವರೂಪ ಪ್ರಶಸ್ತಿ"ಯನ್ನು ಸಾಹಿತ್ಯ-ಕಲೆ-ಸಂಸ್ಕೃತಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಡಾ.ವಸಂತಕುಮಾರ ಪೆರ್ಲ ಅವರಿಗೆ ದಿನಾಂಕ 23-4-2011ರಂದು ರಂಗಸ್ವರೂಪ ಪ್ರತಿಭಾಸಂಗಮ-2011ರ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.




ಸನ್ಮಾನ ಸ್ವೀಕರಿಸಿ ಡಾ.ವಸಂತಕುಮಾರ ಪೆರ್ಲ ಅವರು ಮಾತನಾಡುತ್ತಿರುವುದು. ವೇದಿಕೆಯಲ್ಲಿ 'ರಂಗಸ್ವರೂಪ'ದ ಅಧ್ಯಕ್ಷ ಪ್ರೇಮನಾಥ ಮರ್ಣೆ, ಗೌರವ ಸಲಹೆಗಾರ ಆದಮ್ ಖಾನ್, ಶಿಬಿರ ನಿರ್ದೇಶಕ ರೆಹಮಾನ್, ಶಿಕ್ಷಕಿ ಶ್ರೀಮತಿ ನಂದಿನಿ, ಉದ್ಯಮಿ ಬದ್ರುದ್ದೀನ್ ಕುಳೂರು ಹಾಗೂ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ತಿಪ್ಪೇಶ್ ಅವರನ್ನು ಕಾಣಬಹುದು.



Friday, 22 April 2011

ಕೊಂಕಣ ಸುತ್ತಿ ಮೈಲಾರಕ್ಕೆ

ಸುತ್ತಿ ಬಳಸಿ ಹೇಳುವುದಕ್ಕೆ 'ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಹಾಗೆ' ಎಂಬ ಮಾತನ್ನು ಬಳಸಲಾಗುತ್ತದೆ. ಎತ್ತಣ ಮಾಮರ, ಎತ್ತಣ ಕೋಗಿಲೆ ಎಂದಂತೆ ಕೊಂಕಣ ನಮ್ಮ ಉತ್ತರ ದಿಕ್ಕಿಗಾದರೆ, ಮೈಲಾರಲಿಂಗ ಇರುವುದು ಪೂರ್ವ ದಿಕ್ಕಿನಲ್ಲಿ. ಇಂತಹ ಪೂರ್ವ ದಿಕ್ಕಿನಲ್ಲಿ ನೇರವಾಗಿ ಸಾಗದೆ ಸಮುದ್ರದ ಕಡೆಗೆ ಮೈಚಾಚಿಕೊಂಡಿರುವ ಕೊಂಕಣ ಸೀಮೆಯ ಕಡೆಗೆ ಸಾಗಿದರೆ ವ್ಯರ್ಥವಾಗಿ ಸಮಯ ಹಾಳು ಮತ್ತು ಬರಿದೇ ಓಡಾಟ. ಒಟ್ಟಿನಲ್ಲಿ ಕೊಂಕಣ ಸೀಮೆಯಲ್ಲಿ ಓಡಾಡಬೇಕಾದರೆ ಸುತ್ತಿ ಬಳಸಿ ಹೋಗಬೇಕಾಗುತ್ತದೆ ಎಂಬುದು ಈ ಮಾತಿನ ತಾತ್ಪರ್ಯ. 

ತೆಂಕಣ (ದಕ್ಷಿಣ) ಎಂಬುದು ದಿಕ್ಕನ್ನು ಸೂಚಿಸುವ ಪದವಾದರೆ ಕೊಂಕಣ ಎಂಬುದು ಭೌಗೋಳಿಕ ಸ್ಥಿತಿಗತಿಯನ್ನು ವಿವರಿಸುವ ಶಬ್ದ. ಕೊಂಕು ಎಂದರೆ ಓರೆ ಅಥವಾ ವಕ್ರ ಎಂದರ್ಥ. ಕೊಂಕಣ ಸೀಮೆ ಗುಡ್ಡ ಪರ್ವತಗಳ ಮುಂಚಾಚು, ಸಮುದ್ರದ ಹಿನ್ನೀರು, ಹೊಳೆ-ಹಳ್ಳಗಳು ಸಮುದ್ರ ಸೇರುವ ಕೊರಕಲುಗಳಿಂದಾಗಿ ಕೊಂಕು ಕೊಂಕಾಗಿದೆ. ಆದ್ದರಿಂದಲೇ ಈ ಪ್ರದೇಶ ಕೊಂಕಣಸೀಮೆ ಎಂದು ಹೆಸರಾಗಿದೆ.

ಕೊಂಕಣಿ ಎಂಬುದು ಒಂದು ಜಾತಿ ಸೂಚಕ ಪದ ಅಲ್ಲ. ಯಾರು ಕೊಂಕಣ ಸೀಮೆಯಲ್ಲಿ ವಾಸ ಮಾಡುತ್ತಾರೋ ಅವರೆಲ್ಲರೂ ಕೊಂಕಣಿಗರೇ. ಕಿಣಿ, ಕಾಯ್ಕಿಣಿ, ಕೇಣಿ,  ಕೋಣಿ, ವೆರಣೆ, ರೇವಣ, ಕೆಂಕಣಿ, ನೀಲೇಕಣಿ, ಹಣಕೋಣ, ಕಾಣಕೋಣ ಮೊದಲಾದ ಕಿಂಕಿಣಿಯ ತಾಣಗಳೆಲ್ಲ ಈ ಕೊಂಕಣದ ಸ್ಥಳಗಳೇ ಆಗಿವೆ. ಜೀವನದಲ್ಲಿ ಒಮ್ಮೆಯಾದರೂ ಪ್ರಕೃತಿ ರಮಣೀಯ ಕೊಂಕಣ ಪ್ರಾಂತದಲ್ಲಿ ಪ್ರಯಾಣ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ, ಕೊಂಕಣ ರೈಲು, ಹಡಗು ಪ್ರಯಾಣ ಅಥವಾ ವಿಮಾನ ಮೂಲಕ ಪ್ರಯಾಣ ಮಾಡಿದರೂ ಸಾಕು, ಅರಬ್ಬಿ ಸಮುದ್ರತೀರ ಮತ್ತು ಪಶ್ಚಿಮ ಘಟ್ಟಸಾಲಿನ ಮನೋಹರ ರಮ್ಯತೆ ಮನಸ್ಸನ್ನು ಸೆರೆ ಹಿಡಿಯುತ್ತದೆ. 

ಎಲ್ಲಿ ನೋಡಿದರಲ್ಲಿ ಹಸುರು ಕಾಡು, ತೆಂಗು ಕಂಗಿನ ಮರಗಳು, ಏರು ತಗ್ಗಿನ ತೆವರಿನಂಥ ಜಾಗಗಳಲ್ಲಿ ಪುಟ್ಟ ಪುಟ್ಟ ಬತ್ತದ ಗದ್ದೆಗಳು, ಬಿಳಿ ಹಾಲಿನಂಥ ನೊರೆನೀರ ಹರಿಸುವ ನೀರಿನ ಝರಿಗಳು. ಇಲ್ಲಿರುವಷ್ಟು 'ಬೀಚ್'ಗಳು, ದೇವಸ್ಥಾನಗಳು, ಜಲಪಾತಗಳು, ಕಾಡೊಳಗಿನ ಪ್ರವಾಸೀ ಧಾಮಗಳು, ಮುಗಿಲು ಮುಟ್ಟುವ ಪರ್ವತಾಗ್ರಗಳ ಚಾರಣ ತಾಣಗಳು ಬೇರೆಲ್ಲೂ ಇರಲಾರವು. 

ಹಿಂದಿನ ಕಾಲದಲ್ಲಿ ಸೇತುವೆಗಳಾಗುವ ಮೊದಲು ಕೊಂಕಣ ಸುತ್ತುವುದು ಪ್ರಯಾಸದ ಕೆಲಸವಾಗಿತ್ತಾದರೂ ಇಂದು ಅದೊಂದು ಸುಖಾನುಭವದ ಮೋಜು  ಎನ್ನುವುದರಲ್ಲಿ ಎರಡು ಮಾತಿಲ್ಲ.  ಪ್ರವಾಸ ಮಾಡುವವರಿಗೆ ಕೊಂಕಣ ಪ್ರದೇಶವೆಂಬುದು ರಮ್ಯ ತಾಣವೇ ಸರಿ. ಕಳೆದ ಹತ್ತು ವರ್ಷಗಳಿಂದ ಈ ಭಾಗದಲ್ಲಿ ನಾನು ಹತ್ತಾರು ಚಾರಣಪ್ರವಾಸ ಮಾಡಿದ್ದೇನೆ. ಒಂದೊಂದೂ ರಮ್ಯಾದ್ಭುತ. ಇಲ್ಲಿನ ಕಾಡು ನೋಡುತ್ತಿದ್ದರೆ ಪಾಡು ಹಾಡಾಗುತ್ತದೆ. ಕಷ್ಟ ಮರೆತು ಸುಖ ಮೂಡುತ್ತದೆ.

Thursday, 21 April 2011

ಆಭರಣ ಸಂಹಿತೆ


ಆಭರಣ ತೊಡಲು ಹಿಂದಿನವರು ಶಾಸ್ತ್ರವನ್ನು ವಿಧಿಸಿದ್ದಾರೆ. ಚಿನ್ನದ ಆಭರಣಗಳನ್ನು ಸೊಂಟದಿಂದ ಮೇಲ್ಭಾಗದಲ್ಲಿ ಧರಿಸಬೇಕು ಮತ್ತು ಬೆಳ್ಳಿಯ ಆಭರಣಗಳನ್ನು ಸೊಂಟದಿಂದ ಕೆಳಗೆ ಧರಿಸಬೇಕು. ಕಾರಣ ಇಷ್ಟೆ : ಆಭರಣ ಸೌಂದರ್ಯವರ್ಧಕ. ಅದರಲ್ಲೂ ಚಿನ್ನವು ಶ್ರೇಷ್ಠವಾದ ಲೋಹ; ಕುಸುರಿ ಕೆಲಸಕ್ಕೆ ಅವಕಾಶ ಹೆಚ್ಚು ಮತ್ತು ಅದು ದುಬಾರಿಯಾದ ಲೋಹ ಕೂಡ. ಸೊಂಟದಿಂದ  ಕೆಳಗೆ ಚಿನ್ನದ ಆಭರಣ ಧರಿಸಿದರೆ ಸೌಂದರ್ಯ ಹೆಚ್ಚಾಗುವುದಿಲ್ಲ (ಅಥವಾ  ಹೆಚ್ಚಾದದ್ದು  ಯಾರಿಗೂ ಕಾಣುವುದಿಲ್ಲ!). ಒಂದು ವೇಳೆ ಬೆಲೆಬಾಳುವ ಆಭರಣ ಕಳೆದುಹೋದರೆ ನಮ್ಮ ಗಮನಕ್ಕೆ ಬರುವ ಸಂಭವ ಕಡಿಮೆ. ಅಲ್ಲದೇ 'ಶ್ರೇಷ್ಠತ್ವ' ಎಂಬುದು ಸೊಂಟದಿಂದ ಕೆಳಗೆ ಇಳಿಯಬಾರದು ಎಂಬುದು ಸಾಂಕೇತಿಕತೆ. 'ಶ್ರೇಷ್ಠತ್ವ'ಕ್ಕೆ ಉನ್ನತ ಸ್ಥಾನ ನೀಡಬೇಕು.


ಹೆಣ್ಣನ್ನು ಗಂಡು ಕಣ್ಣೆತ್ತಿ ನೋಡುವುದು ಸಭ್ಯತೆಯ ಲಕ್ಷಣವಲ್ಲ. ಆಕೆ ಸೀರೆ ಉಟ್ಟಿರುತ್ತಾಳೆ. ನಡೆಯುವಾಗ ಪಾದ ಮಾತ್ರ ಕಾಣುತ್ತದೆ. ಆಗ ಕಾಲುಬೆರಳಲ್ಲಿ ಬೆಳ್ಳಿಯ ಕಾಲುಂಗುರ ಧರಿಸಿದ್ದರೆ( ಚಿನ್ನದ ಕಾಲುಂಗುರ ಯಾರೂ ಧರಿಸುವುದಿಲ್ಲ!) ಆಕೆಗೆ ಮದುವೆಯಾಗಿದೆ ಎಂಬುದು ಸಿದ್ಧ. ಪವಿತ್ರಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸುವ ಪದ್ಧತಿ ಬಂದುದು ಈ ಕಾರಣಕ್ಕೆ. ಕಾಲಿಗೆ ಬೆಳ್ಳಿಯ ಕಾಲ್ಗೆಜ್ಜೆ ತೊಡುವುದು ಸೌಂದರ್ಯವೃದ್ಧಿಯ ಒಂದು ಕಾರಣಕ್ಕಾದರೆ, ನಡೆದುಕೊಂಡು ಬರುವಾಗ ಉಂಟಾಗುವ ಕಾಲ್ಗೆಜ್ಜೆಯ ನಾದವು ಮಹಿಳೆಯ ಆಗಮನವನ್ನು ಸೂಚಿಸುತ್ತದೆ.


ಇತ್ತೀಚೆಗೆ ಕೆಲವು ತರುಣಿಯರು ಕಾಲಿಗೆ ಚಿನ್ನದ ಕಾಲ್ಗೆಜ್ಜೆ ತೊಟ್ಟುಕೊಳ್ಳುವುದನ್ನು  ಕಾಣಬಹುದು. ಕೆಲವರ ಕಾಲಿನಲ್ಲಿ ಚಿನ್ನದ ಕಾಲುಂಗುರ ಇರುವುದನ್ನೂ ಗಮನಿಸಬಹುದು. ಇದು ಸರಿಯಲ್ಲ; ಚಿನ್ನದ ಆಭರಣಗಳನ್ನು ಸೊಂಟದಿಂದ ಕೆಳಗೆ ಧರಿಸುವುದು ಶಾಸ್ತ್ರ ಸಮ್ಮತವಲ್ಲ. ಶ್ರೀಮಂತಿಕೆಯ ಅಹಮಿಕೆ, ಪ್ರದರ್ಶನ ಚಾಪಲ್ಯ, ತಿಳಿವಳಿಕೆಯ ಕೊರತೆ  ಅಥವಾ 'ಶ್ರೇಷ್ಠತ್ವವನ್ನು ಕಾಲಿನಷ್ಟು ಕೆಳಗೆ' ತಳ್ಳುವ ಮನೋಭಾವ ಅದರ ಹಿಂದೆ ಇರಬಹುದು.


ದೇವಸ್ಥಾನದ ಕಲಶವನ್ನು ಗೋಪುರದ ಬದಲು ಮೆಟ್ಟಲಿಗೆ ಯಾರಾದರೂ ಇಡುತ್ತಾರೆಯೆ?

Sunday, 17 April 2011

ಕವನ ನನ್ನ ಇಷ್ಟದ ಪ್ರಕಾರ. ಕಳೆದ ಮೂವತ್ತೈದು ವರ್ಷಗಳಿಂದಲೂ ಕವನಗಳನ್ನು ಬರೆಯುತ್ತಾ ಬಂದಿದ್ದೇನೆ. ಆಯ್ದ ಹಲವು ಕವನಗಳು ಐದು ಸಂಕಲನಗಳಲ್ಲಿ ಮುದ್ರಣವಾಗಿವೆ. ನನ್ನ ಬ್ಲಾಗ್ ಓದುಗರಿಗಾಗಿ ಇವತ್ತು ಇನ್ನೊಂದು ಕವನವನ್ನು ನೀಡುತ್ತಿದ್ದೇನೆ. ಇದು ಯಾವುದೇ ಸಂಕಲನದಲ್ಲಿ ಸೇರಿಲ್ಲ.


ಈ ಗಂಗೆಯಲ್ಲಿ

ಈ ಗಂಗೆಯಲ್ಲಿ
ಕಿರು ದೋಣಿಯಲ್ಲಿ
ಹೀಗೆ ತೇಲುತ್ತಿದ್ದರೆ-
ಅಶ್ವತ್ಥ ಎಲೆಯಲ್ಲಿ ಮಲಗಿದ
ಯುಗದಾದಿಯ ಶಿಶುವಿನ ಹಾಗೆ
ಕಾಣುವುದು ಕಣ್ಣತುಂಬ ಬಯಲಬೆಡಗು!

ತೀಡುವುದು ಯೋಜನಗಂಧ
ಸೌಗಂಧಿಕದ ಹಾಗೆ
ಅಡರುವುದು ಮಂಜು 
ತಾಡುವುದು ಕಿರು ಅಲೆಅಲೆಯಂತೆ
ಶಿವಿನ ಜಟೆಯಿಂದ ನೆಗೆದ ಭಗೀರಥ ಜಲಧಿ
ತೊಳೆಯುವುದು ಮನಸ್ಸನ್ನು
ಪರಮಪಾವನೆ ಹರಿಯುತ್ತಿದೆ
ಯುಗಾಂತರದಿಂದ ಈ ನದಿ
ಪಯೋನಿಧಿ

ಗಂಗೆಯೊಡಲಲ್ಲಿ ಹೀಗೆ ತೇಲುತ್ತಿದ್ದರೆ
ಮೇಲೆ ಕಾಣುವುದು ನಿಗಿನಿಗಿ ಉರಿವ 
ಸೂರ್ಯಮಂಡಲ
ಹಿತವಾಗಿ ಬೀಸುವುದು ತಂಗಾಳಿ

ಆಗ ಜಗದ ಜಂಜಡ
ಕಷ್ಟನಷ್ಟಗಳೆಲ್ಲ ಮಂಜಿನಬೆಟ್ಟ-
ದಂತೆ ಕರಗಿ ನೀರಾಗಿ ಹರಿಯುವುದು
ಪಾಪಗಳೆಲ್ಲ ಕರಗುವುದು
ಸ್ವರ್ಗವೇ ಧರೆಗಿಳಿಯುವುದು

ಹೀಗೆ ನೆಲಮುಗಿಲು ಬೆಸೆಯುವ ಈ ಗಂಗೆ
ನಮಗೆಲ್ಲ ಹಿರೇಗಂಗೆ
ಉತ್ತರದಲ್ಲಿ ಉತ್ತುಂಗೆ.

Saturday, 16 April 2011

ದಂಡಯಾತ್ರೆ

ದಂಡಯಾತ್ರೆ ಮಾಡುತ್ತ ಮಾಡುತ್ತ
ಮುಂದೊತ್ತಿ ಬಂದ ಅಲೆಗ್ಸಾಂಡರ
ಕ್ಷಣ ಹೊತ್ತು ಚಕಿತನಾಗಿ ನಿಂತ

ಹಿಂದೆ ಭೋರ್ಗರೆಯುವ ಸೈನ್ಯ
ಮುಂದೆ ಭೋ-
ರೆಂದು ತಣ್ಣಗೆ ಹರಿಯುವ ಸಿಂಧು

ಹೆಜ್ಜೆ ಹಿಂದಿಡದ ರಣೋತ್ಸಾಹಿ
ಸೈನ್ಯಕ್ಕೆ ಕಟ್ಟಾಙ್ಞೆ ವಿಧಿಸಿದ: 
ಮುಂದೊತ್ತಿ ಮುಂದೊತ್ತಿ
ಆಚೆ ಕಡೆಗಿದೆ ನಮ್ಮ ನೆತ್ತಿ

ಯುದ್ಧನಿಷ್ಣಾತ ಸೈನ್ಯ
ಸೋತು ಸುಣ್ಣ
ಸಣ್ಣನೆಯ ಸೊಲ್ಲು:
ನಾನೊಲ್ಲೆ ನಾನೊಲ್ಲೆ

ಎದುರಿಗೆ ಸಪ್ತಸಿಂಧೂ
ಕಣ್ಣಾಚೆ ನೆಟ್ಟ ಅಲೆಗ್ಸಾಂಡರನ ಕಾಲಿಗೆ
ಅಪ್ಪಳಿಸುತ್ತಿತ್ತು ಗೆಲುವಿನಲೆ
ಅಲೆಅಲೆಯಾಗಿ

ಅಲೆಗ್ಸಾಂಡರ ಅಬ್ಬರಿಸಿದ
ನಾನಾರು ಗೊತ್ತೇ
ಸೋಲೇ ಅರಿಯದ ಸರದಾರ
ಜಗದೇಕವೀರ!

ಅಲೆ ತಣ್ಣಗೆ ಹೇಳಿತು:
ಇರಬಹುದು ವೀರ
ಈಗಿಲ್ಲಿ ಬರೆ ನಿನ್ನ ಹೆಸರ
ಆಮೇಲೆ ಹೇಳುವೆ
ನೀನೇ ಲೋಕೋತ್ತರ ವೀರ!

ಅಲೆಗ್ಸಾಂಡರ ನಿರುತ್ತರ
ಅವುಡುಗಚ್ಚಿ ಹಿಂದೆ ತಿರುಗಿದ-
ರೆ, ತಿರುಗಿ ನಿಂತ ಸೈನ್ಯ
ಅಲೆಗ್ಸಾಂಡರನಿಗೆ ಥರಥರ ಜ್ವರ.
ನನ್ನ ಓದುಗರಿಗೆ ಇವತ್ತು ಒಂದು ಕವನವನ್ನು ಓದಲು ಕೊಡುತ್ತಿದ್ದೇನೆ. ಇದು ತೀರ ಹೊಸ ರಚನೆ ಅಲ್ಲ. ಹಾಗೆಂದು ಹಿಂದಿನ ಸಂಕಲನಗಳಲ್ಲಿ ಸೇರಿಲ್ಲ. ಬಾಹುಬಲಿ ಕಲ್ಲಿನಲ್ಲಿ ಅರಳಿದ್ದಾನೆ ಎಂಬುದು ನಮಗೆಲ್ಲ ಗೊತ್ತಿರುವ ಸಂಗತಿ. ಅವನನ್ನು ಸ್ಥಾವರಗೊಳಿಸಿ ನಾವು ರಾಗದ್ವೇಷಾದಿಗಳಲ್ಲಿ ಮುಳುಗಿದೆವು. ಅರಳಿ ನಿಂತಿರುವ ಅವನು, ಲೋಗರಾದ ನಮ್ಮನ್ನು ತಿದ್ದುವ ಉದ್ದೇಶದಿಂದ ಮಾತಾಡಿಸುತ್ತಿದ್ದಾನೆ, ಆದರೆ ನಾವು ಕಲ್ಲಾಗಿದ್ದೇವೆ ಎಂಬುದು ಇಲ್ಲಿನ ವ್ಯಂಗ್ಯ.

ಬಾಹುಬಲಿ

ಬಲಶಾಲಿ ಬಾಹುಬಲಿ
ಕಲ್ಲರಳಿ ಹೂವಾಗಿದ್ದಾನೆ
ಬೆಟ್ಟದ ಮೇಲೆ ಅಚಲವಾಗಿದ್ದಾನೆ
ಗಗನದೆತ್ತರದಲ್ಲಿ
ಬೆತ್ತಲಾಗಿದ್ದಾನೆ

ಜಗವ ಜಯಿಸಿ
ನಿರಾಯುಧನಾಗಿದ್ದಾನೆ
ಹಗುರವಾಗಿದ್ದಾನೆ
ಆತ್ಮೋನ್ನತಿಯ ನರುಗಂಪು ಸೂಸುತ್ತ
ನಸುನಗುತ್ತಿದ್ದಾನೆ

ಮಹಾಬಲಿ ಬಾಹುಬಲಿ
ಗೆದ್ದಿದ್ದಾನೆ ತನ್ನನ್ನು ಹೀಗೆ
ಶಿಖರದುತ್ತುಂಗದಲ್ಲಿ ನಿಂತಿದ್ದರೂ
ಇಳಿದು ಬರುವಂತಿದ್ದಾನೆ
ಕಲ್ಲಾಗಿರುವ ನಮ್ಮನ್ನು ಕಡೆಯುವಂತಿದ್ದಾನೆ

ಬಾಹುಬಲಿ
ಒಲವಿನಲಿ
ಹೀಗೆ ಬರುವಂತಿದ್ದರೂ
ನಾವು ಕಲ್ಲಾಗಿದ್ದೇವೆ
ಕಣ್ಣು ಮುಚ್ಚಿದ್ದೇವೆ
ಒಳಗೊಳಗೆ ಕುದಿಯುತ್ತ
ಮುಷ್ಟಿ ಹಿಡಿದಿದ್ದೇವೆ!

Friday, 15 April 2011

ನಿಮ್ಮೊಂದಿಗೆ...

ನನ್ನ ಬ್ಲಾಗ್ ಗೆ ನಾಲ್ಕು ತಿಂಗಳು ಆಯಿತು. ಈಗ ನಿಮ್ಮೊಂದಿಗೆ ನಾಲ್ಕು ಮಾತು ಆಡಬೇಕು ಅನಿಸುತ್ತಿದೆ. ಹಾಳೆಯ ಬರವಣಿಗೆಯಿಂದ ಕಂಪ್ಯೂಟರ್ ಬರವಣಿಗೆಗೆ ಬಂದಿರುವುದು ನನಗೆ ಹೊಸ ಅನುಭವ.  ಈ ಕಂಪ್ಯೂಟರ್ ಬರವಣಿಗೆಯನ್ನು  ಯಾರು ಓದುತ್ತಾರೆ ಎಂಬ ಅಸಡ್ಡೆ ಮತ್ತು ಅನಾಸಕ್ತಿ ನನಗೆ ಆರಂಭದಲ್ಲಿ ಇತ್ತು. ಆ ಭಾವನೆ ತಪ್ಪು ಎಂಬುದು ಈಗ ಮನವರಿಕೆಯಾಗುತ್ತಿದೆ. ತುಂಬ ಮಂದಿ ಈಗ ಇದನ್ನು ಓದುತ್ತಿದ್ದಾರೆ ಎಂಬುದು ಅಂಕಿಸಂಖ್ಯೆ ಸಹಿತ ಗೊತ್ತಾಗುತ್ತಿದೆ. ಇದು ನಿಜವಾಗಿಯೂ ಸಂತೋಷ ಕೊಡುವ ಸಂಗತಿ.

ನನಗೆ ಬ್ಲಾಗ್ ಬಗ್ಗೆ ಮೊದಲು ಏನೂ ತಿಳಿದಿರಲಿಲ್ಲ. ಸ್ನೇಹಿತರು, ನಿಮಗೆ ಬ್ಲಾಗ್ ಇಲ್ಲವೇ, ಇ-ಮೇಲ್ ವಿಳಾಸ ಇಲ್ಲವೇ ಎಂದು ಕೇಳತೊಡಗಿದರು. ಈ ಪ್ರಶ್ನೆ ಹೆಚ್ಚು ಹೆಚ್ಚಾಗಿ ಕಿವಿಗೆ ಬೀಳತೊಡಗಿದಾಗ ನಾನು ಎಚ್ಚರಾದೆ, ಇದೇನು ನೋಡಿಯೇ ಬಿಡೋಣ ಎಂದು ನಾನೂ ಬ್ಲಾಗ್ ಪ್ರಪಂಚ ಪ್ರವೇಶಿಸಿದೆ.

ಪ್ರವೇಶಿಸಿದ ಬಳಿಕ ಇದರ ಸಾಧ್ಯತೆ ಮತ್ತು ಅಗಾಧತೆ ಕಂಡು ಆಶ್ಚರ್ಯಗೊಂಡೆ. ಇದುವರೆಗಿನ ನನ್ನ ಅಜ್ಞಾನಕ್ಕೆ ಮತ್ತು ವಿಳಂಬ ಮಾಡಿದ್ದಕ್ಕೆ ನಾನೇ ಮರುಕಪಡುವಂತಾಯಿತು. ಹಿಂದೆ ನಾವು ಅಕ್ಷರಸ್ಥರು, ಅನಕ್ಷರಸ್ಥರು ಎಂದು ಮಾತಾಡಿಕೊಳ್ಳುತ್ತಿದ್ದಂತೆ, ಬಹುಶಃ ಇನ್ನು ಮುಂದೆ ಕಂಪ್ಯೂಟರ್ ಜ್ಞಾನಿಗಳು, , ಕಂಪ್ಯೂಟರ್ ಅಜ್ಞಾನಿಗಳು  ಎಂದು ಹೇಳುವ ದಿನ ಬರಬಹುದು. ಬರಬಹುದು ಏನು, ಈಗಾಗಲೇ ಬಂದಿದೆ. ಹಳ್ಳಿಗಳ ಪಾರಂಪರಿಕ ತಿಳಿವಳಿಕೆ ಮತ್ತು ಕೃಷಿ ಪಾಂಡಿತ್ಯ ಇಂದು ನಮಗೆಲ್ಲಿದೆ? ಒಬ್ಬ ವ್ಯಕ್ತಿ ಎಲ್ಲ ವಿಷಯಗಳಲ್ಲೂ ಪಂಡಿತನಾಗಿರಲು ಸಾಧ್ಯವಿಲ್ಲ. ಕೃಷಿಯಲ್ಲಿ ಆಳವಾದ ತಿಳಿವಳಿಕೆ ಇದೆ ಎಂದಾದರೆ ಆತ ಕೃಷಿಪಂಡಿತನೇ ಹೌದು. ನಮಗೆ ಗೊತ್ತಿರುವ ನಾಲ್ಕು ಅಕ್ಷರ ಹಿಡಿದುಕೊಂಡು ಇದೇ ಮಹಾಜ್ಞಾನ  ಎಂಬಂತೆ ನಾವು ಮಾತಾಡುತ್ತೇವೆ ಮತ್ತು ಅಹಂಕಾರದಿಂದ ಎಲ್ಲಾ ವಿಷಯಗಳಿಗೂ ತಲೆಹಾಕುತ್ತೇವೆ! ಪಾಪ, ಅಷ್ಟೆಲ್ಲಾ ತಿಳಿದಿದ್ದರೂ ಹಳ್ಳಿಗರು, ನಾವು ನಾಲ್ಕಕ್ಷರ ಕಲಿತಿಲ್ಲವಲ್ಲ ಎಂದು ಹಳಹಳಿಸುತ್ತ  ಕೀಳರಿಮೆ ಪಡುತ್ತಾರೆ. ಅದೇ ಕೀಳರಿಮೆ  ಕಂಪ್ಯೂಟರ್ ಬಾರದ ನಮಗೂ ನಾಳೆ ಬಂದರೆ ಆಶ್ಚರ್ಯವೇನಿಲ್ಲ!

ಬ್ಯಾಂಕಿಂಗ್ ವ್ಯವಹಾರದಲ್ಲೇ ಎಷ್ಟು ಬದಲಾವಣೆ ಆಗಿದೆ, ನೋಡಿ. ಈಗ  ನಮ್ಮ ಖಾತೆಯಲ್ಲಿ ಹಣ ಇದ್ದರೆ ಚೆಕ್ ಬರೆದು, ಕ್ಯೂ ನಿಂತು, ಹಣ ಪಡೆದು, ಎಣಿಸುತ್ತಾ ಕೂರಬೇಕಾಗಿಲ್ಲ. ಎಟಿಎಂನಿಂದ ಒಂದೇ ಕ್ಷಣದಲ್ಲಿ ಹಣ ಪಡೆಯಬಹುದು. ಮೊಬೈಲ್ ನಿಂದ ಪ್ರಪಂಚದಲ್ಲಿರುವ ಯಾರನ್ನು ಬೇಕಾದರೂ ಒಂದು ಕ್ಷಣದಲ್ಲಿ ಸಂಪರ್ಕಿಸಬಹುದು. ಸಂದೇಶಗಳ ಪ್ರಮಾಣ ಮತ್ತು ಪರಿಣಾಮಗಳನ್ನು ನಾವು ಈಗಾಗಲೇ ತಿಳಿದಿದ್ದೇವೆ.ನೀರಿನ ಬಿಲ್ , ಕರೆಂಟು ಬಿಲ್ಲು ಗಳ ಪಾವತಿ, ಪ್ರಯಾಣದ ಟಿಕೆಟ್ ಮುಂಗಡ ಕಾಯ್ದಿರಿಸುವುದು, ಹಣಕಾಸು ವ್ಯವಹಾರ ಮೊದಲಾದ ಕೆಲಸಗಳು ಕಂಪ್ಯೂಟರ್ ನೆರವಿನಿಂದ ಕುಳಿತಲ್ಲೇ ಆಗುತ್ತದೆ. ಒಂದು ಕಂಪ್ಯೂಟರ್ ನಿಂದ ದಾಖಲೆಗಳನ್ನು ಒಯ್ಯಲು ಪೆನ್ ಡ್ರೈವ್ ಅನ್ನು ಬಳಸುತ್ತೇವೆ.ಬಳಸಿದ ಬಳಿಕ ಅಲ್ಲಿ ಇಲ್ಲಿ ಮರೆತು ಹೋಗುತ್ತದೆ. ಹತ್ತಾರು ಪೆನ್ ಡ್ರೈವ್ ಗಳು ಒಂದು ರೀತಿಯಲ್ಲಿ ಕಿರಿಕಿರಿ  ಅನ್ನಿಸಿದ್ದೂ ಉಂಟು. ಈಗ ಮಾಹಿತಿಗಳನ್ನು  ತುಂಬಿಡಲು  ಪ್ರತ್ಯೇಕ ಸೈಟ್ ಗಳು ಬಂದ ಬಳಿಕ ಪೆನ್ ಡ್ರೈವ್ ಕೂಡ ಅಸ್ತಿತ್ವ  ಕಳೆದುಕೊಳ್ಳತೊಡಗಿದೆ.  

ಇನ್ನು ಮೂವತ್ತು ನಲವತ್ತು ವರ್ಷಕ್ಕೆ ಪುಸ್ತಕಗಳು, ಪತ್ರಿಕೆಗಳು ಎರಡನೇ ಸ್ಥಾನಕ್ಕೆ ಹೋಗಬಹುದೆಂದು ತೋರುತ್ತದೆ. ಅದೇನು ಆಶ್ಚರ್ಯದ ಮಾತಲ್ಲ. ಯಾಕೆಂದರೆ ಮೊಟ್ಟಮೊದಲು ಶಿಲಾಲೇಖ ಇತ್ತು. ಅನಂತರ ತಾಮ್ರಪಟ, ತಾಳೆಗರಿಗಳ ಬರವಣಿಗೆ ಬಂತು. ಸುಮಾರು ಇನ್ನೂರು ವರ್ಷಗಳ ಹಿಂದಷ್ಟೇ ಹಾಳೆಗಳ ಬಳಕೆ ಬಂದದ್ದು. ಮುದ್ರಣತಾಂತ್ರಿಕತೆ ಬಂದ ಬಳಿಕ ಪುಸ್ತಕಗಳು, ಪತ್ರಿಕೆಗಳು ವ್ಯಾಪಕವಾದವು. ಇನ್ನೀಗ ಎಲೆಕ್ಟ್ರಾನಿಕ್ ಯುಗ. ಶಿಲೆ, ತಾಮ್ರ, ತಾಳೆಗರಿಗಳ ಬರವಣಿಗೆ ಮಾಯವಾದಂತೆ, ಕ್ರಮೇಣ ಹಾಳೆಗಳ ಮೇಲಿನ ಬರವಣಿಗೆಯೂ  ಮಾಯವಾದರೆ ಖಂಡಿತ ಆಶ್ಚರ್ಯ ಪಡಬೇಕಿಲ್ಲ. ಈಗ ಪತ್ರ ಬರೆಯುವ ಕ್ರಮ ಎಲ್ಲಿದೆ? ನಾವು ಚಿಕ್ಕವರಾಗಿದ್ದಾಗ ಪತ್ರ ಬರೆದು ಒಬ್ಬರನ್ನೊಬ್ಬರು ಸಂಪರ್ಕಿಸಬೇಕಿದ್ದರೆ ಹತ್ತು-ಹದಿನೈದು ದಿನ ತಗಲುತ್ತಿತ್ತು. ಈಗ ಹತ್ತು-ಹದಿನೈದು ಸೆಕೆಂಡ್ ಕೂಡಾ ಬೇಕಾಗಿಲ್ಲ!

ತಾಂತ್ರಿಕತೆ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ನಾವು ಅದಕ್ಕೆ ಬೇಕಾದಂತೆ ಹೊಂದಿಕೊಳ್ಳದಿದ್ದರೆ ನಾವು ಅಪ್ರಸ್ತುತರಾಗಿಬಿಡುತ್ತೇವೆ. ನಾಗರಿಕತೆ ಎಂದರೆ ಅದೇ ಅಲ್ಲವೇ? ನಾವು ನಾಗರಿಕತೆಯನ್ನು ಟೀಕಿಸುತ್ತಾ ಟೀಕಿಸುತ್ತಾ ಅದರ ಒಂದು ಭಾಗವೇ ಆಗಿ ಬಿಡುವುದು ನಮಗೇ ಗೊತ್ತಾಗುವುದಿಲ್ಲ! ಹೆಚ್ಚು ಹೆಚ್ಚು ಟೀಕಿಸುವುದೆಂದರೆ ನಾವು ಹೆಚ್ಚು ಹೆಚ್ಚು ಅದರ ಸಮೀಪಕ್ಕೆ ಹೋಗುತ್ತಿದ್ದೇವೆಂದೇ ಅರ್ಥ.

ನಾನು ನನ್ನ ಸಾಹಿತ್ಯಕೃತಿಗಳನ್ನೆಲ್ಲ ಬ್ಲಾಗ್ ಗೆ ಹಾಕುವ ಉದ್ದೇಶವನ್ನು ಸದ್ಯಕ್ಕೆ ಹೊಂದಿಲ್ಲ. ಸಣ್ಣಪುಟ್ಟ ಅನಿಸಿಕೆಗಳನ್ನು, ಕೆಲವು ಚಿಂತನೆಗಳನ್ನು,  ಆಗೀಗೊಮ್ಮೆ ಕೆಲವು ಕವನಗಳನ್ನು, ಕೆಲವು ಫೊಟೋ ವರದಿಗಳನ್ನು ಹಾಕುತ್ತಿದ್ದೇನೆ. ಇದು ಕೇವಲ ಪ್ರಾಯೋಗಿಕ. ಈ ವಿದ್ಯಮಾನ ನನ್ನನ್ನು ಹೇಗೆ ಒಳಗೆ ಎಳೆದುಕೊಳ್ಳುತ್ತದೋ ಹಾಗೆ ಕೆಲಸ ಮಾಡುತ್ತ ಹೋಗುವ ಮನಸ್ಸು ಮಾಡಿದ್ದೇನೆ.

ಪುಸ್ತಕಗಳಲ್ಲಿರುವ ಮಾಹಿತಿ ಙ್ಞಾನವೆಲ್ಲ ಹಾಗೆಹಾಗೆಯೇ ಕಂಪ್ಯೂಟರ್ ಗೆ ವರ್ಗಾವಣೆ ಆಗಬೇಕೆಂದೇನೂ ಇಲ್ಲ. ಅದು ಕಾರ್ಯಸಾಧ್ಯವೂ ಅಲ್ಲ. ಅಲ್ಲಿನ ಪ್ರಮುಖ ಸಾರ ಮತ್ತು ಮುಂದುವರಿಕೆಯ ಙ್ಞಾನ ಇಲ್ಲಿಗೆ ಬಂದರೆ ಆಯಿತು. ಹೊಳೆ ಹರಿಯುವ ಹಾಗೆ ಅದನ್ನೇ ತಾನೆ ನಿರಂತರತೆ ಅನ್ನುವುದು?

ಬ್ಲಾಗ್ ಬರವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ಈಗ ನಾವು ವಿಭಾಗಿಸಿಕೊಂಡಿರುವ ಸಾಹಿತ್ಯ ಪ್ರಕಾರಗಳು ಹಾಗೆಯೇ ಮುಂದುವರಿಯುವುದೆಂಬ  ಭರವಸೆಯಿಲ್ಲ. ಅಂದರೆ, ಈಗ ಕಾದಂಬರಿ, ಕಥಾ ಸಂಕಲನ, ಕವನ ಸಂಕಲನ, ಪ್ರಬಂಧ ಸಂಕಲನ ಎಂದು ಬೇರೆ ಬೇರೆಯಾಗಿ ನಾವು ತಿಳಿದುಕೊಂಡಿರುವಂತೆ ಬ್ಲಾಗ್ ನಲ್ಲಿ ಹಾಗೇನೂ ಇರಲಾರದು. ಈ ಪ್ರಕಾರಗಳೆಲ್ಲ ಆಧುನಿಕ ಸಾಹಿತ್ಯದ ವಿಭಾಗಕ್ರಮಗಳು. ಹಳಗನ್ನಡದ ಚಂಪೂ ಸಾಹಿತ್ಯದಲ್ಲಿ ಗದ್ಯ (ವಚನ), ಪದ್ಯ (ಕಾವ್ಯ)  ಎರಡೂ ಇದ್ದವು. ಗದ್ಯದಲ್ಲಿರುವ ಕೆಂಪುನಾರಾಯಣನ 'ಮುದ್ರಾಮಂಜೂಷ'ವನ್ನು ನಾವು ಕಾವ್ಯಪ್ರಕಾರಕ್ಕೆ ಸೇರಿಸಿದ್ದೇವೆ. ವಚನಸಾಹಿತ್ಯವನ್ನಂತೂ (ಅದು ನಿಜವಾಗಿ ಗದ್ಯದಲ್ಲಿದೆ) ನಾವು ಕಾವ್ಯಪ್ರಕಾರಕ್ಕೆ ಸೇರಿಸಿಬಿಟ್ಟಿದ್ದೇವೆ. ಅಂದರೆ ಸಾಹಿತ್ಯಪ್ರಕಾರ ಎಂಬ ಪರಿಕಲ್ಪನೆಯು ಕೂಡ  ಕಾಲಕಾಲಕ್ಕೆ ಬದಲಾಗುವಂಥದ್ದೇ ಆಗಿದೆ.  ತಾಂತ್ರಿಕ ಆವಿಷ್ಕಾರವಾದ ಈ ಆಧುನಿಕೋತ್ತರ ಬ್ಲಾಗ್ ನಲ್ಲಿ, ಒಬ್ಬ ಲೇಖಕನಿಗೆ ಕಾಲಕಾಲಕ್ಕೆ ಹೊಳೆಯುವ ವಿಚಾರಗಳು ಬೇರೆಬೇರೆ ಪ್ರಕಾರಗಳಲ್ಲಿ ಪಡಿಮೂಡಿ ಬ್ಲಾಗಿನಲ್ಲಿ ರೂಪು ಪಡೆಯುತ್ತಾ ಪ್ರಕಾರನಿಷ್ಟೆಯೇ  ಮಾಯವಾಗಿಬಿಡಬಹುದು. ಆದರೆ ಬರವಣಿಗೆಗೆ ಹೆಚ್ಚು ಸ್ವಾತಂತ್ತ್ರ್ಯ , ರುಚಿ, ತೀವ್ರತೆ ಮತ್ತು ವೈವಿಧ್ಯ ಒದಗಬಹುದು ಎಂಬುದೂ ಅಷ್ಟೇ ಸತ್ಯ.

ಮುಂದಿನ ತಲೆಮಾರುಗಳ ಜನರ ವ್ಯವಹಾರ, ಬರವಣಿಗೆಗಳು ಇಂಟರ್ ನೆಟ್ ಮತ್ತು ಬ್ಲಾಗ್ ಗಳ ಮೂಲಕ ಇರಬಹುದೆಂದು ತೋರುತ್ತದೆ.

ನನ್ನ ಬರವಣಿಗೆ ಬಗ್ಗೆ ಪ್ರತಿಕ್ರಿಯಿಸಲು ಮರೆಯಬೇಡಿ. ನಮಸ್ಕಾರ.

Thursday, 14 April 2011

ಸೂರ್ಯನೇ ಸುಳ್ಳು!


ಈ ಬರಹವನ್ನು ಓದಿ ಖಂಡಿತ ನಗಬೇಡಿ! ಸೂರ್ಯನೇ ಸುಳ್ಳು ಎಂದರೆ, ಕಾಲದ ಹಿನ್ನೆಲೆಯಲ್ಲಿ, ಸೂರ್ಯ ಕೇವಲ ಕ್ಷಣಿಕ; ಆತನ ಅಸ್ತಿತ್ವವು ಶಾಶ್ವತವಲ್ಲ ಎಂಬುದು ಭಾವಾರ್ಥ.


ಆಕಾಶವೆಂದರೆ ಶಕ್ತಿಯ ಒಂದು ಮಹಾಮೇಳ. ನಿರಂತರ ಚಲನೆಯ ದೆಸೆಯಿಂದಾಗಿ ಆಕಾಶದಲ್ಲಿ ಅಲ್ಲಲ್ಲಿ ಶಕ್ತಿಯ ಕೆಲವು ಕೇಂದ್ರಬಿಂದುಗಳು ನಿರ್ಮಾಣವಾಗುತ್ತವೆ ಮತ್ತು ಶಕ್ತಿಸಂಚಯನವನ್ನು ತಡೆದುಕೊಳ್ಳಲಾರದೆ ಅವು ಸ್ಫೋಟಗೊಳ್ಳುತ್ತವೆ. ಇವು ನಕ್ಷತ್ರಗಳಾಗಿ ರೂಪುಗೊಳ್ಳುತ್ತವೆ. ಶಕ್ತಿಯ ಉಂಡೆಗಳಾಗಿರುವುದರಿಂದ ಬಹಳ ಕಾಲ ಅವು ಉರಿದು ಕ್ರಮೇಣ ನಂದಿ ಹೋಗಿ ಕತ್ತಲೆಯ ಕೂಪದಲ್ಲಿ ವಿಲೀನವಾಗಿಬಿಡುತ್ತವೆ. ಹಾಗಾಗಿ ಕತ್ತಲೆಯೇ ಶಾಶ್ವತ ಮತ್ತು ಸತ್ಯ!

ಕತ್ತಲೆಯೇ ಒಟ್ಟು ಮೊತ್ತವಾಗಿರುವ ಈ ವಿಶ್ವದಲ್ಲಿ ಕೇಂದ್ರಭಾಗದಿಂದ ಸ್ಫೋಟಿಸಿ ಚದುರಿಹೋದ ಶಕ್ತಿಗಳು ಉರಿದು ನಂದಿಹೋಗುತ್ತವೆ. ಅಂದರೆ ಟಾರ್ಚನ್ನು ನಾವು ಒತ್ತಿ ಹಿಡಿದಷ್ಟು ಹೊತ್ತು ಮಾತ್ರ ಬೆಳಕಿರುವಂತೆ ಮತ್ತು ಕೈಬಿಟ್ಟಾಗ ಬೆಳಕು ಆರಿಹೋಗುವಂತೆ ಸೂರ್ಯ ಕೂಡ (ಕಾಲದ ಹಿನ್ನೆಲೆಯಲ್ಲಿ) ಉರಿಯುವುದು ಕ್ಷಣ ಹೊತ್ತು ಮಾತ್ರ.


ಬೆಳಕು ಮತ್ತು ಶಾಖ ಇರುವಲ್ಲಿ ಮಾತ್ರ ಪ್ರಾಕೃತಿಕವಾದ  ಸೃಷ್ಟಿಕ್ರಿಯೆ ಇರುತ್ತದೆ. ಅದು ಕೂಡ, ಸೂರ್ಯ ಇರುವಷ್ಟು ಹೊತ್ತು ಮಾತ್ರ.

ಕತ್ತಲಾವರಿಸುವುದು, ಸ್ಫೋಟ ಸಂಭವಿಸಿ ಆ ಶಕ್ತಿಕೇಂದ್ರಗಳು ಕೆಲಕಾಲ ಉರಿಯುವುದು, ಮತ್ತೆ ನಂದಿ ಕತ್ತಲಾಗುವುದು - ಇದೊಂದು ನಿರಂತರ ಕ್ರಿಯೆ. ನಮ್ಮ ದೃಷ್ಟಿಯಲ್ಲಿ ಎಷ್ಟೋ ಕೋಟಿ ವರ್ಷಗಳಿಗೊಮ್ಮೆ ಈ ಕ್ರಿಯೆ ನಡೆಯುವುದಾಗಿರಬಹುದು, ಆದರೆ ಬೆಳಕು ಅಶಾಶ್ವತ ಮತ್ತು ಕತ್ತಲೆಯೇ ದೊಡ್ಡ ಮೊತ್ತ ಎನ್ನಬಹುದು. ಜಗತ್ತು ಮಿಥ್ಯೆ (ಜಗನ್ಮಿಥ್ಯಾ) ಎಂದು ಶಂಕರಾಚಾರ್ಯರು ಹೇಳಿದ್ದು ಈ ಅರ್ಥದಲ್ಲಿ.

ಕತ್ತಲಿನ ದೀರ್ಘತೆಗೆ ಮತ್ತು ಮಹಾಮೌನಕ್ಕೆ ಕೊನೆಮೊದಲಿಲ್ಲ. ಅಮಾವಾಸ್ಯೆಯ ಕಾರಿರುಳಲ್ಲಿ ಮಿಂಚುಹುಳಗಳನ್ನು ಕಲ್ಪಿಸಿಕೊಳ್ಳಿ. ಆ ಮಿಂಚುಹುಳಗಳ ಬೆಳಕು ಶಾಶ್ವತವೇ? 

Tuesday, 12 April 2011

MATSYAKANNIKA




                                                      Myself and Shri Bhat                                


Recently I had been to Thiruvananthpuram to attend a workshop.  During my stay, I visited Kochuveli, the traditional village of Kerala and Shankhumukham shore and Kovalam beach etc., with Sri P. S. Soorynarayana Bhat, Programme Executive of All India Radio, Manglaore.  The above statue, 'Matsyakannika' is  near Shankhumukham facing towards the sea.  The statue of the matsyakannika is, as if, just came out of the Sea to take Sun-bath lying on the petals of a lotus flower thinking that no earthly creatures are around her. The free and modest posture and gesture of the matsyakannika, which has appeared truly in the imagination of the artist,  gives a serene beauty to the whole beach-side. The  place, Shankhumukham  is named so because of the landscape.  Tourism Dept., of Kerala, though the traditionalists protested for the erection of the nude mural, has installed the matsyakannika's cement  statue which is one of the attractions of Shankumukham beach.

Saturday, 9 April 2011



SYNTHERI ROCKS AND ULAVI CAVES


Last year I had visited with family and friends to Syntheri rocks and the nearby Ulavi Shri Chennabasaveshwara Temple which are situated inside the thick forest of Dandeli of Uttara Kannada District.  Syntheri rock is famous for natural caves formed by river Kaneri, a tributary of river Kali. While flowing through the valleys, river Kaneri formed several caves in the rock-cut valley of Syntheri, which have geographycal  importance.  The river-flow disappear in some caves and appear in some other caves with ferocious speed and current which forms several whirls and gives a wonderful image of laughing flowers. The scene is fantastic and heart-throbbing. One should be very careful while moving around here.

The team near the Syntheri Rocks.

Ulavi is  situated nearby the Syntheri rocks, in the thick forest. Here several natural caves are there, where Chennabasava, nephew of Basaveshwara  took hide after “Kalyana kranthi” of 12th century.  In the vicinity of six kilometres there are six major caves. Three are at the cow-head hill, which is a single big rock, namely Akkanagavva cave, Rudrakshi cave and Chennabasava cave. Nearby is a natural water fountain in which water flows all throught the year. It is named as "haralayyana chilume". Haralayya was a close aide of Chennebasava, who might be searched and noticed this water source in the thick forest. Three kilometres away from here a major cave, called 'Mahamane' is really a trekking point. It is said that the team of Chennabasava was conducting meeting (anubhava mantapa) at this cave and named as 'mahamane'.The way towards all the caves are very steep and difficult to reach. One has to crawl-down to enter inside.  Inside the Mahamane cave  there is a water pond and thousands of bats attack on you if you dare to enter! Snakes and crocodiles may also be there. We can see it from outside and enter maximum till 10-15 feet. Another cave is situated 3 k.m.s away from Ulavi. One can visit these caves safely during summer with little attack of leaches. The deity of Ulavi, must be installed by Chennabasava during those days, is named after him. At Ulavi, after five years of hide-out  Chennabasava lost his life. After this, Ulavi became an important historical place. Thousands of people gather for the Car Festival which is being held every year during the month of March. 


Team members spiritedly gathered near the Ulavi Temple.

Friday, 8 April 2011

 RELEASING A BOOK


"Olavondu Lalithakale" collection of poetry is being released by the guests.
Today I have participated in a book releasing function  as chief guest at Shri Kalikamba Vinayaka Temple, Mangalore. The book was a collection of poems in Kannada, titled “Olavondu Lalithakale”, by Shri Yashodhara N.Acharya, Mundkur. The function was graced by Shri Shri Kalahasthendra Saraswathi Swamiji of Anegondi Mutt, Katapady,Udupi and chaired by Shri K.Keshava Acharya, Mangalore. Publisher Shri K.Bhuvanabhirama Udupa of Kinnigoli was also present.


I am addressing the gathering.

“There are different kinds of expressions. Carpentry, sports activity, setting-up of a business industry, a painting all these are different kinds of expressions of Mankind. We cannot predict in which field one’s ability is being expressed. One who expresses according to his ability and available resources. Then the role of encouragement of the society comes. In the selected field how He achieves is according to His will-power and ability” I said, and  continued “ Shri Yashodhara N.Acharya gave expression to the love feelings in the back-ground of rich village life. The poems are nothing but expressions of different kinds of experience in the back-drop of village life”.

Poet Shri Yashodhara N. Acharya has recited a poem from the collection. Shri Swamiji has Graced the poet.

Tuesday, 5 April 2011

ಮರಿಜಿಂಕೆಯಂತೆ ಶಾಲೆಗೆ...


ಎರಡು ವಾರಗಳ ರಜೆಯ ಬಳಿಕ ಆಗಮ ಪೆರ್ಲ ಮತ್ತೆ ಶಾಲೆಗೆ ಹೊರಟಿದ್ದಾನೆ. ಇಂದೀಗ ಅವನ ಯು.ಕೆ.ಜಿ ತರಗತಿ ಆರಂಭವಾಗಿದೆ. ಹೊಸ ಸಮವಸ್ತ್ರ, ಹೊಸ ಶೂಸ್, ಹೊಸ ಚೀಲ, ಹೊಸ ಪುಸ್ತಕಗಳೊಂದಿಗೆ... ಅವನ ಸರಿತಾ ಮಿಸ್ ದೂರದಿಂದಲೇ "ಆಗಮ್"  ಅಂದಾಗ ತರಗತಿಗೆ ಓಡೋಡಿ ಹೋಗುವ ಆಗಮ ಈ ರಜೆಯಲ್ಲಿ ಹೊಸ ಕನ್ನಡ ಹಾಡು ಕಲಿತಿದ್ದಾನೆ.



ಕೇಂದ್ರೀಯ ವಿದ್ಯಾಲಯಕ್ಕೆ ಸೇರ್ಪಡೆಯಾದ ಕೋಸ್ಟ್ ಗಾರ್ಡ್ ಶಾಲೆ ಅವನ ಮನೆ "ಭೂಮಿಗೀತ"ಕ್ಕೆ ತೀರಾ ಸಮೀಪ...



Saturday, 2 April 2011


A SELF RELIANT VILLAGE



Yesterday I had been to Katukukke, a remote village of Kasargod, to preside over the 5th anniversary celebration of the local Shri Subrahmanyeshwara Friends’ Club, Katukukke, which was co-incited with the Prathishta Vardhanthi of Shri Subrahmanyeshwara deity. Prize distributions to the talented youth, honouring the elderly local priest etc. are included in the programme list followed by a Tulu drama. Nearly three thousand village folk gathered all-around as it was a feast for them the entire night.




A tonic to go ahead...cash award..


Surrounded with hillocks and tributaries the way to Katukukke is a long and narrow country road with curves and culverts all through-out and covered by vast arecanut gardens and coconut palms, is really an un-polluted area from the point of city dwellers. The programme started around 8 p.m. and went up-to 10.30 p.m. The mass were eagerly waiting for the commencement of the entertainment drama.



Remembering the long and self-less service...

I spoke on the uniqueness of rural life and showed concern on the widening gap between villages and cities. “As villages are the primary units, we have to strengthen the villages first. Unless this is done, our goal of constructing a strong Nation will be a myth”, I said, and “if we strengthen the villages, our culture and language will also be flourished. Each village should be independent, resourceful and self-reliant. If so migration from villages to cities will be minimized and it will pave the way to all-round development” I stressed.

Shri Prakash Malpe, a social worker from Udupi and Shri Sachchidanand Khanderi, Chairman of Temple Committee was on the dais.

HEALTH IS WEALTH



“Health is not only the concern of body, but it is related to the mind as well. That is why health is considered as wealth” said Dr. Vasanthkumar Perla, Head of AIR, Karwar, while speaking on the inaugural function of “Sushrutha Clinic” at Kasaragod recently.



sitting prettily all the guests...


 “Health is still having a wider range. As per Vedic philosophy health is wholesome. It is connected to society and environment also. To get a sound and healthy personality, both physically and mentally, society and environment also should be sound and un-polluted. Our Ayurveda system is looked on-to that” he remarked.




"Health is everything...."  Dr. Perla said

The clinic was started by Dr. Naveen Kulamarva, a young and enterprising professional hailing from a remote village of Kasargod in the intention to serve the local milieu. He told that pure Ayurvedic systems including “panchakarma chikitsa” are available in the clinic.

Shri I.V.Bhat, Dr.Suraj, Dr.Ganapathi Bhat Kulamarva were present on the occasion.

Friday, 1 April 2011



AN EVENING AT THE 'MEENA CLUB'


Marakada is a beautiful extension of Mangalore city on the way to the Bajpe Airport. Surrounded by  Phalguni river and with green valleys, it is Bhoomigeetha (Song of the Earth) in the real sense. The place is gifted with bountiful of nature and fascinating sceneries.





Recently, in Marakada Higher Primary School, a rare and unique program was arranged by the Meena Club for the benifit of local ladies and students of the vicinity. The program was on the occasion of International Women's Day. My wife, K.Shailakumari had participated as chief guest and spoke on the importance of women education and self-reliance. She gave-away prizes to the students who secured first places in the academic activities. 





Students and the local people gathered in highest number and made the event a grand sucsess.They participated in the program enthusiastically. Cultural activities by the students were appreciated by the gathering.